(ಅಮೆರಿಕನ್ ಪ್ರಯೋಗ) (ರೈಲ್ವೆ) ಕೆಲಸಗಾರರ ಡಬ್ಬಿ; ಮಾಲುಗಾಡಿಗೆ (ಸಾಮಾನ್ಯವಾಗಿ ಹಿಂಭಾಗಕ್ಕೆ) ಲಗತ್ತಿಸಿರುವ, ರೈಲಿನ ಕೆಲಸಗಾರರು ಮೊದಲಾದವರಿಗಾಗಿ ಇರುವ ಡಬ್ಬಿ, ಗಾಡಿ.
cabotage
ನಾಮವಾಚಕ
ಕರಾವಳಿ ವ್ಯಾಪಾರ; ತೀರಪ್ರದೇಶದ ವ್ಯಾಪಾರ.
ಒಳನಾಡು ವ್ಯಾಪಾರ; ದೇಶದಲ್ಲಿನ ಯಾವುದಾದರೂ ಎರಡು ಸ್ಥಳಗಳ ನಡುವೆ ಮಾತ್ರ ನಡೆಯುವ ವ್ಯಾಪಾರ.
ಒಳನಾಡಮಿತಿ; ದೇಶದ ಗಡಿಗಳೊಳಗೆ ಸ್ವದೇಶಿ ವಿಮಾನಗಳ ಹಾರಾಟದ ಮೇಲೆ ಕಾನೂನುರೀತ್ಯಾ ಹಾಕಿರುವ ಮಿತಿ.
cabotin
ನಾಮವಾಚಕ
(ಸ್ತ್ರೀಲಿಂಗ cabotine ಉಚ್ಚಾರಣೆ– ಕಾಬಟೀನ್). ಎರಡನೆಯ ದರ್ಜೆ ನಟ.
cabriole
ನಾಮವಾಚಕ
(ಇಂಗ್ಲಂಡಿನ ಕ್ವೀನ್ ಆನ್ ಮತ್ತು ಚಿಪಂಡೇಲ್ ಪೀಠೋಪಕರಣಗಳ ಗುರುತಾದ) ಉಬ್ಬುಗಾಲು; ಮುಖ್ಯವಾಗಿ 18ನೇ ಶತಮಾನದ ಪೂರ್ವಾರ್ಧದಲ್ಲಿ ಬಳಕೆಯಲ್ಲಿದ್ದ, ಮೇಲ್ಭಾಗದಲ್ಲಿ ಹೊರಕ್ಕೆ ಬಾಗಿರುವ, ತುದಿಯಲ್ಲಿ ದುಂಡಗಿರುವ, ಪ್ರಾಣಿಯ ಪಂಜಗಳನ್ನು ಯಾ ಇನ್ನಾವುದೇ ಆಕೃತಿಯನ್ನು ಹೋಲುವ, ಪೀಠದ ಪಾದ.
(ಬ್ಯಾಲೆ) ಪಾದ ತಾಡನ ಜಿಗಿತ; ನರ್ತನದಲ್ಲಿ ಒಂದು ಕಾಲನ್ನು ಮೇಲೆತ್ತಿ ಇನ್ನೊಂದರಿಂದ ಅದನ್ನು ತಾಡಿಸುವುದು.
cabriolet
ನಾಮವಾಚಕ
ಕ್ಯಾಬ್ರಿಅಲೇ:
(ಚರಿತ್ರೆ) ಮಡಚುಚಾವಣಿಯ ಒಂಟಿಕುದುರೆಬಂಡಿ; ಮಡಚುಚಾವಣಿ ಇರುವ, ಎರಡು ಚಕ್ರದ ಹಗುರ ಬಂಡಿ.
ಮಡಚುಚಾವಣಿ(ಯಿರುವ) ಮೋಟಾರು ಕಾರು.
cacanny
ನಾಮವಾಚಕ
ಉತ್ಪನ್ನವಿಳಂಬ; ಉತ್ಪಾದನೆವಿಳಂಬ; ಬೇಕೆಂದೇ ಉತ್ಪನ್ನವನ್ನು ಮಿತಿಗೊಳಿಸುವ ಯಾ ಕಡಿಮೆ ಮಾಡುವ ಕಾರ್ಮಿಕ ಸಂಘದ ನೀತಿ.