Sankshipta Kannada Nighantu (Kannada Sahitya Parishattu)
Kannada Sahitya Parishattu
ಅಂಟುಕ
ಬೆನ್ನು ಹತ್ತುವ ಸ್ವಭಾವವುಳ್ಳವನು.
ಅಂಟುಗಲ್ಲು
ಸೆಳೆಯುವ ಶಕ್ತಿಯುಳ್ಳ ಕಲ್ಲು.
ಅಂಟುಜಾಡ್ಯ
ಒಬ್ಬರಿಂದ ಒಬ್ಬರಿಗೆ ಹರಡುವ ರೋಗ.
ಅಂಟುಪುರುಲೆ
ಸೋಕಿದರೆ ಅಂಟಿಕೊಳ್ಳುವ ತೆನೆಯುಳ್ಳ ಒಂದು ಬಗೆಯ ಹುಲ್ಲು.
ಅಂಟುರೋಗ
ಅಂಟುಜಾಡ್ಯ.
ಅಂಟುವಲೆ
ಅಂಟನ್ನು ಸವರಿ ಮೃಗ ಪಕ್ಷಿಗಳನ್ನು ಹಿಡಿಯಲು ಉಪಯೋಗಿಸುವ ಒಂದು ಬಗೆಯ ಬಲೆ.
ಅಂಟುವಾಳ
(ಶುದ್ಧಿಗಾಗಿ ಬಳಸುವ) ನೀರಿನಲ್ಲಿ ನೆನೆಸಿ ಉಜ್ಜಿದಾಗ ನೊರೆ ಹೊರಡುವ ಒಂದು ಬಗೆಯ ಕಾಯಿ.
ಅಂಡ
1. ತತ್ತಿ.
2. ಬೀಜ.
3. ವೃಷಣಕೋಶ.
4. ಕಸ್ತೂರಿಮೃಗದ ಕಸ್ತೂರಿಯಿರುವ ಕೋಶü.
5. ವೀರ್ಯ.
6. ಪ್ರಪಂಚ.
ಅಂಡಗೆ
ದೊಡ್ಡ ಮೂಟೆ.
ಅಂಡಜ
1. ಮೊಟ್ಟೆಯೊಡೆದು ಹುಟ್ಟುವ ಹಕ್ಕಿ ಹಾವು ಹಲ್ಲಿ ಮೀನು ಮುಂತಾದ ಜೀವಿ.
2. ಬ್ರಹ್ಮ.
ಅಂಡಜಧ್ವಜ
(ಗರುಡ)ಪಕ್ಷಿಯನ್ನು ಧ್ವಜದಲ್ಲಿ ಹೊಂದಿರುವವನು.
ಅಂಡಜಾಧಿಪ
1. ಸರ್ಪರಾಜ.
2. ಗರುಡ.
ಅಂಡಲೆ
1. ಹಿಂಸೆ.
2. ಚಿಂತೆ.
3. ಅಲೆದಾಟ.
ಅಂಡಲೆ
1. ಕಾಡು.
2. ಜರೆ.
3. ಕಷ್ಟಕ್ಕೆ ಒಳಗಾಗು.
4. ಅಲೆದಾಡು.
5. ವ್ಯಾಪಿಸು.
6. ಬಲಾತ್ಕಾರ ಮಾಡು.
7. ಹಿಂದೆಗೆ.
8. ಹೊಡೆ.
ಅಂಡಲೆತ
ಕ್ಲೇಶ.
ಅಂಡವಾತ
ವೃಷಣವು ಬಾತುಕೊಳ್ಳುವ ಒಂದು ಬಗೆಯ ರೋಗ.
ಅಂಡವಾಯು
ಅಂಡವಾತ.
ಅಂಡಾಶಯ
ವೃಷಣದ ಚೀಲ.
ಅಂಡಿಗೆ
1. ಅಂಡಗೆ.
2. ಸುರುಳಿ.
ಅಂಡಿಸು
1. ಹತ್ತಿರ ಹೋಗು.
2. ಒದಗು.
3. ಹಿಂದೆಗೆ.
4. ಕುಳಿತುಕೊಳ್ಳು.