Sankshipta Kannada Nighantu (Kannada Sahitya Parishattu)
Kannada Sahitya Parishattu
ಹೋಳಿ
1. ಕಾಮನ ಹಬ್ಬ.
2. ಎಸೆಯುವಿಕೆ.
3. ಬೆಂಕಿ.
4. ಬಲಿ.
ಹೋಳಿಗೆ
1. ಒಂದು ಬಗೆಯ ಸಿಹಿತಿಂಡಿ.
2. ಹೊಪ್ಪಳೆ.
ಹೋಳಿಸು
1. ಎರಡು ಭಾಗ ಮಾಡು.
2. ಮುರಿಯುವಂತೆ ಮಾಡು.
ಹೋಳು
ಚೂರು.
ಹೋಳು
1. ಒಡೆ.
2. ನಾಶಮಾಡು.
ಹೋಳುಗಳೆ
1. ತುಂಡುಮಾಡು.
2. ನಾಶಮಾಡು.
3. ಛಿದ್ರ ವಾಗು.
ಹೌದ
1. ನೀರಿನ ತೊಟ್ಟಿ,- ದೊಡ್ಡ ಬಾನಿ.
2. ಅಂಬಾರಿ.
ಹೌದಾ
ಆನೆಯ ಮೇಲೆ ಕುಳಿತುಕೊಳ್ಳಲು ಹಾಕುವ ಆಸನ.
ಹೌದು
ಸಮ್ಮತಿಯನ್ನು ಸೂಚಿಸುವ ಒಂದು ಅವ್ಯಯ.
ಹೌದು
ನೀರಿನ ತೊಟ್ಟಿ.
ಹೌಸ
1. ಉತ್ಸಾಹ.
2. ಹಿರಿಯಾಸೆ.
3. (ಜೈನರಲ್ಲಿ) ಕತ್ತಲೆಯಾಗುವುದಕ್ಕೆ ಮುನ್ನ ಆಹಾರ ಸ್ವೀಕರಿಸುವ ವ್ರತ,- ನಿಯಮ.
ಹೌಸು
1. ಉತ್ಸಾಹ.
2. ಹಿರಿಯಾಸೆ.
ಹೌಹಾರು
ಬೆದರು.
ಹ್ಯಾಪುಮೋರೆ
ಪೆಚ್ಚುಮುಖ.
ಹ್ರದ
ಆಳವಾದ ನೀರಿರುವ ಪ್ರದೇಶ.
ಹ್ರಸ್ವ
1. ಚಿಕ್ಕದು.
2. (ಛಂದಸ್ಸಿನಲ್ಲಿ) ಒಂದು ಮಾತ್ರೆಯ ಅವಧಿಯಲ್ಲಿ ಉಚ್ಚರಿಸುವ ಸ್ವರ.
3. (ವ್ಯಾಕರಣದಲ್ಲಿ) ದೀರ್ಘವಲ್ಲದ ಅಕ್ಷರ.
ಹ್ರಸ್ವ
ಚಿಕ್ಕದಾದ.
ಹ್ರಾದಿನಿ
1. ಮಿಂಚು.
2. ಸಿಡಿಲು.
3. ಇಂದ್ರನ ವಜ್ರಾಯುಧ.
4. ನದಿ.
5. ಆನೆಬೇಲದ ಮರ.
ಹ್ರಾಸ
1. ಕಡಮೆಯಾಗುವಿಕೆ.
2. ಕೊರತೆ.
ಹ್ರೀ
1. ಲಜ್ಜೆ.
2. ಚಂದ್ರನ ಹದಿನಾರು ಕಲೆಗಳಲ್ಲಿ ಒಂದು.