भारतीय भाषाओं द्वारा ज्ञान

Knowledge through Indian Languages

Dictionary

Malenada Nudikosha (KANNADA-KJU)

Karnataka Janapada University

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

< previous1234567Next >

ಎಕರೆ

ನಲವತ್ತು ಗುಂಟೆಗಳ ಭೂಮಿಯ ಅಳತೆ

ಎಕ್ಕಡ

ಮೆಟ್ಟು, ಪಾದರಕ್ಷೆ, ಚಪ್ಪಲಿ

ಎಕ್ಕು

ಎಟುಕು

ಎಕ್ಕೆಗಿಡ

ಅಗಲ ಎಲೆಯ ಪೊದೆಯಂತಹ ಗಿಡ, ಬಿಳಿ ಮತ್ತು ಬೂದು ಬಣ್ಣದ ಹೂವುಗಳು, ಔಷಧಿಯುಕ್ತ

ಎಗರು

ನೆಗೆ, ಹಾರು

ಎಗ್ಗ

ಒರಟ, ದಡ್ಡ

ಎಗ್ಗುತಗ್ಗು

ನಾಚಿಕೆ, ಸಂಕೋಚ, ಮುಗ್ಧತೆ

ಎಚ್ಚರ

ನಿದ್ರೆಯಿಂದ ಏಳುವುದು, ಜಾಗ್ರತೆ

ಎಚ್ಚರ ತಪ್ಪು

ಮೂರ್ಛೆ ಹೋಗು, ಮೈಮರೆ

ಎಚ್ಚರಿಕೆ

ಜಾಗರೂಕತೆ

ಎಂಜಲು

ಉಗುಳು, ತಿಂದ ನಂತರ ಕೈ, ಬಾಯಿ, ಎಲೆಗೆ ಮುಟ್ಟಿದ ಆಹಾರ

ಎಟಕು

ನಿಲುಕು, ಸಿಕ್ಕುವಿಕೆ

ಎಂಟು

ಎಂಟರ ಸಂಖ್ಯೆ

ಎಂಟೆಂಟು

ಎಂಟಕ್ಕೆ ಎಂಟನ್ನು ಕೂಡಿಸುತ್ತಾ ಹೋಗು.

ಎಂಟ್ನೂರು

ಎಂಟನ್ನು ನೂರರಿಂದ ಗುಣಿಸಿದ್ದು

ಎಡ

ವಾಮಭಾಗ

ಎಡಕಲು

ಅಡಿಗೆ ಮಾಡಿದ ಮಡಕೆಗಳನ್ನು ಒಂದರ ಮೇಲೊಂದು ಜೋಡಿಸಿಡುವ ಸಿಕ್ಕ

ಎಡಗಣ್ಣು ಹಾರು

ಎಡದ ಕಣ್ಣು ಅದುರು, ಅಶುಭ ಸೂಚಕ ಎಂಬ ನಂಬಿಕೆ.

ಎಡಗು

ಎಡವು, ತಪ್ಪು ನಡೆ, ನಡೆಯುವಾಗ ಕಾಲಿಗೆ ಅಡ್ಡಿಯುಂಟಾಗುವುದು.

ಎಡಚ

ಲೊಡ್ಡ, ಎಡಗೈ ಉಪಯೋಗಿಸಿ ಹೆಚ್ಚು ಕೆಲಸಮಾಡುವುದು.
< previous1234567Next >

Languages

Dictionary Search

Loading Results

Quick Search

Follow Us :   
  भारतवाणी ऐप डाउनलोड करो
  Bharatavani Windows App