भारतीय भाषाओं द्वारा ज्ञान

Knowledge through Indian Languages

Dictionary

Kannada Janapada Nighantu Vol-1 (KJU)

Karnataka Janapada University

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

ಈರಣ್ಣಶಾಂಕ್ರಪ್ಪ

ಉತ್ತರ ಕರ್ನಾಟಕದ ರೈತರು ಪೂಜಿಸುವ ದೈವಗಳು (ಬಿಜಾ.ಜಿ)

ಈರತಮುನಿ

ವಿರಕ್ತಮುನಿ (ಚಾಮ.ಜಿ)

ಈರದಹಬ್ಬ

ಮೈಸೂರು ಜಿಲ್ಲೆಯ ತಗಡೂರಿನಲ್ಲಿ ಆಚರಿಸುವ ಹಬ್ಬ

ಈರದಿಮ್ಮಮ್ಮನ ಕಣಿವೆ

ಕೋಲಾರ ಜಿಲ್ಲೆಯ ಗೌರಿಬಿದನೂರು ಹಾಗೂ ಚಿಕ್ಕಬಳ್ಳಾಪುರದ ನಡುವೆ ಇರುವ ಒಂದು ಕಣಿವೆ

ಈರನಾಗಮ್ಮ

ಕೆಂಡಕೊಂಡ ಪ್ರವೇಶಿಸಿ ಮಹಾಸತಿಯಾದ ವೀರ ನಾಗಮ್ಮ ಎಂಬ ಸ್ತ್ರೀ; ಈಕೆಯನ್ನು ಕುರಿತ ಕಥನಗೀತೆಗಳು ಬಹಳ ಪ್ರಸಿದ್ಧ. (ಬಳ್ಳಾ.ಜಿ)

ಈರನಾರ್

ಒಂದು ಚರ್ಮವಾದ್ಯ;ಅರೆ; ಉರುಮೆ

ಈರಬಡಮ್ಮ

ಗೊಲ್ಲರ ಹೆಣ್ಣು ದೇವತೆ; ಬೊಮೈಲಿಂಗನ ತಂಗಿ

ಈರಬಸವಿ

ವೀರಬಸವಿ

ಈರಬಸವಿ

ದೇವರ ಹೆಸರಿನಲ್ಲಿ ಬಿಟ್ಟ ವೇಶ್ಯ

ಈರಬಸವಿ

ನಡತೆ ಸರಿ ಇಲ್ಲದವಳು

ಈರರು

ವೀರರು; ದೇವರ ಅಂಗರಕ್ಷರು; ದೇವತೆಯನ್ನು ಸ್ತುತಿಸಿ, ಪೂಜಿಸಿ, ಹಾಡಿ, ಹರಸಿ, ಹೊಗಳಿ ಮೆರೆಸುವುದಕ್ಕೆ ಸಹಕರಿಸುವ ಭಕ್ತರು.

ಈರಲಪ್ಪ

ಹಸು ಇದ್ದಕ್ಕಿದ್ದ ಹಾಗೆ ಸತ್ತಾಗ ಈ ಸಾವು ನಿರ್ದಿಷ್ಟ ದೇವತೆಯಿಂದ ಆದದ್ದು ಎಂದು ತಿಳಿದು ಆಯಾ ದೇವರ ಹೆಸರಿನಿಂದ ಕಾಯಿಲೆಯನ್ನು ಗುರುತಿಸುತ್ತಾರೆ. ಅಂತಹವುಗಳಲ್ಲಿ ಇದೂ ಒಂದು (ಕೋಲಾ.ಜಿ)

ಈರಲು

ನೋಡಿ- ಈರ‍್ಲು

ಈರಲುಪೂಜೆ

ಮಗು ಹುಟ್ಟಿದ ಮೂರನೆಯ ದಿನ ಮಾಡುವ ಪೂಜೆ. ನೋಡಿ- ಈರ‍್ಲು

ಈರಿ

ನೋಡಿ- ಈಲಿ

ಈರಿಕೋಲು

ಬೇಟೆಯಾಡಿದ ಪ್ರಾಣಿಯ ಈಲಿಯನ್ನು ಸುಟ್ಟು ಬೇಟೆದೇವರಿಗೆ ಅರ್ಪಿಸಲು ಬಳಸಲ್ಪಡುವ ಕೋಲು

ಈರಿಕೋಲು

ಕಡ್ಡಿಯಲ್ಲಿ ಚುಚ್ಚಿ ಬೆಂಕಿಯಲ್ಲಿ ಬೇಯಿಸಿದ ಮಾಂಸ.
ಕರಕಲುಕಡ್ಡಿ

ಈರಿತೆಗೆ

ಪ್ರಾಣ ತೆಗೆ (ತುಮ.ಜಿ)

ಈರಿನಸೊಪ್ಪು

ಒಂದು ಔಷಧಿ ಸಸ್ಯ; ಜ್ವರ ನಿವಾರಿಸಲು ಇದರ ಸೊಪ್ಪನ್ನು ಅರೆದು ಲೇಪಿಸುತ್ತಾರೆ (ಚಾಮ.ಜಿ)

ಈರುಳ್ಳಿಬುಟ್ಟಿ

ಈರುಳ್ಳಿ ಸಂಗ್ರಹಿಸಿಡಲು ಬಳಸುವ ಸಾಧನ. ಸುಮಾರು ಒಂದು ಅಡಿ ಎತ್ತರವಿದ್ದು ಒಂದು ಅಡಿ ವ್ಯಾಸವನ್ನು ಹೊಂದಿರುವ ಇದನ್ನು ಕಬ್ಬಿಣದ ಸಣ್ಣ ಸಣ್ಣ ತಂತಿಗಳಿಂದ ಹೆಣೆಯಲಾಗಿರುತ್ತದೆ. ಬುಟ್ಟಿಯ ಮೇಲ್ಭಾಗದಲ್ಲಿ ಮುಚ್ಚಳವಿದ್ದು ಹಿಡಿದುಕೊಳ್ಳಲು ತಂತಿ ಹಿಡಿಕೆ ಇರುತ್ತದೆ. ಬುಟ್ಟಿಯಲ್ಲಿರುವ ಈರುಳ್ಳಿಗೆ ಗಾಳಿ ಆಡುವುದರಿಂದ ಈರುಳ್ಳಿಯು ಬಹಳದಿನ ಕೆಡುವುದಿಲ್ಲ

Languages

Dictionary Search

Loading Results

Quick Search

Follow Us :   
  भारतवाणी ऐप डाउनलोड करो
  Bharatavani Windows App